NATIONAL ENVIRONMENT CARE FEDERATION (R.)

ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ರಿ.)

ಆತ್ಮಿಯರೇ,
ಪರಿಸರ ಎಂಬುದು ಕೇವಲ ಭಾಷಣದ ಘೋಷಣೆ ಅಲ್ಲ. ಅದು ಈ ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳ ಜೀವನಾಡಿ, ಪಂಚಭೂತಗಳಾದ ಅಗ್ನಿ, ವಾಯು, ಆಕಾಶ, ನೆಲ ಮತ್ತು ಜಲಗಳು ಈ ಪರಿಸರದ ಮೂಲಭೂತ ವಸ್ತುಗಳು. ಇವುಗಳ ಪರಿಶುದ್ಧತೆಯೇ ಸಂತೃಪ್ತ ಜೀವನದ ಮಾರ್ಗ. ನಿಮ್ಮ ಕಣ್ಣುಗಳನ್ನು ಒಮ್ಮೆ ಮುಚ್ಚಿಕೊಂಡು ನೀವು ಮರುಭೂಮಿಯಲ್ಲಿ ಇದ್ದಂತೆ ಭಾವಿಸಿಕೊಳ್ಳಿ, ಎಲ್ಲೆಲ್ಲೂ ಉರಿಬಿಸಿಲು, ಹನಿ ನೀರಿಗೂ ತತ್ತ್ವ್ತಾರ. ಇಂಥಹ ಪರಿಸರದಲ್ಲಿ ನಿಮ್ಮ ಬದುಕನ್ನು ರೂಪಿಸಿಕೊಳ್ಳಲು ನಿಮಗೆ ಸಾಧ್ಯ ಇದೆಯೇ ?. ಅಬ್ಬಾ ಅದು ಭಯಾನಕ ಹಾಗೆ ಇನ್ನೊಂದು ದೃಷ್ಟಾಂತವನ್ನು ಕಲ್ಪಿಸಿಕೊಳ್ಳಿ. ಅದೊಂದು ಸುಂದರವಾದ ಹಸಿರು ಕಾಡು. ಎಲ್ಲೆಲ್ಲೂ ಹೂವು, ಹಣ್ಣುಗಳಿಂದ ತುಂಬಿ ಕಂಗೊಳಿಸುತ್ತಿರುವ ಮರಗಿಡಗಳು, ಚಿಟ್ಟೆ, ಹಕ್ಕಿ, ಪ್ರಾಣಿಗಳು ನೀರಿನ ತೊರೆ ಇವುಗಳ ಮಧ್ಯೆ ನಿಮ್ಮ ಬದುಕನ್ನು ಕಲ್ಪಿಸಿಕೊಳ್ಳಿ. ಬಹಳ ಸುಂದರ ಅಲ್ಲವೆ ಇದಕ್ಕೇ ಹೇಳುವುದು ಹಸಿರು ತುಂಬಿದ ಪರಿಸರ ಮಾತ್ರ ನಮಗೆ ನೆಮ್ಮದಿಯ ಆರೋಗ್ಯಕರ ಬದುಕನ್ನು ನೀಡಬಲ್ಲುದು.
21 ನೇ ಶತಮಾನದ ಆಧುನಿಕ ಯುಗದಲ್ಲಿ ಯಾಂತ್ರಿಕವಾದ ಬದುಕನ್ನು ಕಳೆಯುತ್ತಿರುವ ನಾವು ಜೀವನದ ಕೊನೆಯವರೆಗೂ ಆರ್ಥಿಕ ಸಂಪಾದನೆಯಲ್ಲಿಯೇ ಜೀವನದ ಹೋರಾಟದ ಬಹುಭಾಗವನ್ನು ಕಳೆಯುತಿದ್ದ್ತೇವೆ. ಕಲ್ಮಶಗೊಂಡ ಗಾಳಿ, ಅಶುದ್ಧ ನೀರು, ಶಬ್ದಮಾಲಿನ್ಯ, ಇವುಗಳಿಂದ ನಮ್ಮ ಜೀವಿತದ ಅವಧಿ ವರುಷದಿಂದ ವರುಷಕ್ಕೆ ಕಡಿಮೆ ಆಗುವುದರ ಜೊತೆಗೆ ದುಡಿದ ಬಹುಭಾಗವನ್ನು ಹದಗೆಟ್ಟ ಆರೋಗ್ಯ ರಿಪೇರಿಗಾಗಿ ಆಸ್ಪತ್ರೆಗಳಿಗೆ ಮದ್ದಿಗಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕೇವಲ ಎರಡು ಶತಮಾನಗಳಲ್ಲಿ ಜಗತ್ತಿನ ಒಟ್ಟು ಕಾಡಿನ 52% ನಾವು ನಾಶಮಾಡಿ ಕೈಗಾರಿಕೆಗಳಾಗಿ, ವಾಸ್ತವ್ಯಕ್ಕಾಗಿ ಹಾಗೂ ಕೃಷಿ ಮತ್ತು ವಾಣಿಜ್ಯ ಬೆಳೆಗಳನ್ನಾಗಿ ಪರಿವರ್ತಿಸಿಕೊಂಡಿದ್ದೇವೆ. ಹೀಗೆ ಕಾಲ ಮುಂದುವರೆಯುತ್ತಾ ಹೋದಲ್ಲಿ ಮುಂದಿನ ನಮ್ಮ ಪೀಳಿಗೆಯು ನೀವು ಈ ಮೊದಲು ಕಲ್ಪಿಸಿಕೊಂಡಂತಹ ಮರುಭೂಮಿಯ ವಾಸವನ್ನು ಅನುಭವಿಸಬೇಕಾದೀತು.
ಒಂದು ಕ್ಷಣ ಯೋಚಿಸಿ ನೋಡಿ. ಈ ಪ್ರಕೃತಿ ನಮಗೆ ಏನೆಲ್ಲಾ ಕೊಡುಗೆಗಳನ್ನು ನೀಡಿದೆ. ಆದರೆ ನಾವು ಈ ಪ್ರಕೃತಿಗೆ ಏನನ್ನು ಕೊಡುತ್ತಿದ್ದೇವೆ. ದಿನ ನಿತ್ಯ ವಾಹನದ ಹೊಗೆ, ಕಲ್ಮಶಗೊಂಡ ನೀರು ಭೂಮಿಯ ಎದೆ ಆಳವನ್ನು ಬಗೆದು ಕಲ್ಲಿದ್ದಲು, ಖನಿಜ ಸಂಪತ್ತುಗಳನ್ನು ತೆಗೆದು ಪರಿಸರ ನಾಶ. ಇದಕ್ಕಿಂತ ಮಿಗಿಲಾಗಿ ನೀವು ಏನನ್ನು ಕೊಡಬಲ್ಲಿರಿ? ಕೊಡಬಹುದು ಕನಿಷ್ಟ ನಿಮ್ಮ ನೆನಪಲ್ಲಿ ಒಂದು ಗಿಡವನ್ನು ನೆಟ್ಟು ಬೆಳೆಸಿದರೆ. ಅದೇ ಈ ಭೂಮಿಗೆ ನೀವು ಕೊಡಬಹುದಾದಂತಹ ಬಲು ಅಮೂಲ್ಯ ಕೊಡುಗೆ. ನಿಮ್ಮ ಹಾಗೂ ನಿಮ್ಮ ಮಕ್ಕಳ ಹುಟ್ಟುಹಬ್ಬದ ದಿನದಂದು , ನಿಮ್ಮ ಮದುವೆಯ ದಿನದಂದು ಒಂದೊಂದು ಗಿಡ ನೆಡಿ, ಈ ಗಿಡಗಳು ಮಕ್ಕಳಿದ್ದಂತೆ, 3 ರಿಂದ 5 ವರುಷಗಳವರೆಗೆ ಇದರ ಪಾಲನೆ ಅಗತ್ಯ. ಚಿಕ್ಕ ಗಿಡವಾಗಿದ್ದರೆ ಸೂರ್ಯನ ಬಿಸಿಲಿನಿಂದ ಬಾಡದಂತೆ ಚಿಕ್ಕ ಮರೆ ಮಾಡಿರಿ. ವಾರಕ್ಕೊಮ್ಮೆ ನಿಮ್ಮ ಬಿಡುವಿನ ಸಮಯದಲ್ಲಿ 2 ರಿಂದ 5 ಲೀಟರ್ ನೀರನ್ನು ತಂದು ನೀವು ನೆಟ್ಟ ಗಿಡಗಳಿಗೆ ಹಾಕಿರಿ.
ನೀವು ಪ್ಲಾಟುಗಳಲ್ಲಿ ವಾಸಿಸುತ್ತಿದ್ದರೆ ಕನಿಷ್ಟ ಒಂದು ಚಟ್ಟಿಯಲ್ಲಿ ಗಿಡವನ್ನಾದರೂ ನೆಡಿ ಅಥವಾ ಸಾರ್ವಜನಿಕ ರಸ್ತೆಯ ಬದಿಗಳಲ್ಲಿ, ಪಾರ್ಕುಗಳಲ್ಲಿ ನೆಡಬಹುದು. ನಿಮ್ಮ ಗೆಳೆಯರಿಗೂ, ಬಂದುಗಳಿಗೂ ನಿಮ್ಮ ನಿಮ್ಮ ಮನೆಯ ಬದಿ ಸ್ಥಳಗಳಲ್ಲಿ ಸಸ್ಯಗಳನ್ನು ಬೆಳೆಸುವಂತೆ ಪ್ರೇರೇಪಿಸಿ. ಗಿಡಗಳಿಗೆ ಕಾಯಿಲೆ ಬಂದಾಗ ಸೂಕ್ತ ಚಿಕಿತ್ಸೆ ನೀಡಿ. ವರುಷಕ್ಕೊಮ್ಮೆ ಕಸ ತೆಗೆದು ಗೊಬ್ಬರ ನೀಡಿ. ವರುಷಕ್ಕೊಮ್ಮೆ ನಿಮ್ಮ ಪರಿವಾರದವರೊಂದಿಗೆ ಆಗಮಿಸಿ ನೀವು ನೆಟ್ಟು ಬೆಳೆಸಿದ ಮರಗಳನ್ನು ಅಪ್ಪಿಕೊಳ್ಳಿ ನಿಮಗೆ ಈ ಮರಗಳು ಕೊಡುವ ಸಂತೋಷವನ್ನು ಗಮನಿಸಿ.
ವನ್ಯ ಜೀವಿಗಳಿಗೆ ನಿಮ್ಮಂತೆ ಜೀವ ಇದೆ. ಅವರಿಗೂ ಬಂದು ಭಾಂದವರಿದ್ದಾರೆ ಅವರನ್ನು ಹಿಂಸಿಸಬೇಡಿ.
ಅವರಿಗೂ ಬದುಕಲು ಬಿಡಿ.
ನಮ್ಮ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದೊಂದಿಗೆ ನೀವೂ ಕೈ ಸೇರಿಸಿ, ಸದಸ್ಯರಾಗಿ, ಹಸಿರು ನಾಡನ್ನು ಕಟ್ಟೋಣ.

Featured
Media News
NECF News
Paper News
Use Full Links
Western Ghat
Contact Us

We're not around right now. But you can send us an email and we'll get back to you, asap.

Not readable? Change text. captcha txt

Start typing and press Enter to search